ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರ ಖಾತೆಗೆ 11 ನೇ ಕಂತಿನ 2000 ರೂಪಾಯಿಗಳನ್ನುಈಗಾಗಲೇ ವರ್ಗಾಯಿಸಲಾಗಿದೆ.
ಶೀಘ್ರದಲ್ಲಿಯೇ 12ನೇ ಕಂತಿನ 2000 ರೂಪಾಯಿ ರೈತರ ಖಾತೆಗೆ ವರ್ಗಾವಣೆಯಾಗಲಿದೆ.
ಈ ಬದಲಾವಣೆ 12 ಕೋಟಿಗೂ ಹೆಚ್ಚು ನೋಂದಾಯಿತ ರೈತರ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಈ ಬದಲಾವಣೆ ಜಾರಿಗೆ ತರುವ ಮೂಲಕ ರೈತರಿಂದ ದೊಡ್ಡ ಸೌಲಭ್ಯವನ್ನೇ ಕಸಿದುಕೊಳ್ಳಲಾಗಿದೆ.
ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಈ ಬದಲಾವಣೆಯ ನಂತರ ಇದೀಗ ರೈತ ಪೋರ್ಟಲ್‌ಗೆ ಭೇಟಿ ನೀಡಲು ಮತ್ತು ಆಧಾರ್ ಸಂಖ್ಯೆಯಿಂದ ತನ್ನ ಸ್ಟೇಟಸ್ ಪರಿಶೀಲಿಸಲು ಸಾಧ್ಯವಾಗುವುದಿಲ್ಲ.
ಈ ಹಿಂದೆ ರೈತರು ತಮ್ಮ ಆಧಾರ್ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ತಮ್ಮ ಸ್ಟೇಟಸ್ ತಿಳಿದುಕೊಳ್ಳಬಹುದಿತ್ತು.
ಈ ಹಿಂದೆ ರೈತರು ತಮ್ಮ ಆಧಾರ್ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ತಮ್ಮ ಸ್ಟೇಟಸ್ ತಿಳಿದುಕೊಳ್ಳಬಹುದಿತ್ತು.
ಇದಾದ ನಂತರ ಸ್ಟೇಟಸ್ ಪರಿಶೀಲನೆಗೆ ಮೊಬೈಲ್ ನಂಬರ್ ಅಲ್ಲ, ಆಧಾರ್ ನಂಬರ್ ಅಗತ್ಯ ಎಂಬ ನಿಯಮವನ್ನು ಕಡ್ಡಾಯ ಮಾಡಲಾಗಿತ್ತು. ಆದರೆ ಈಗ ಹೊಸ ನಿಯಮದ ಪ್ರಕಾರ, ರೈತರು ಆಧಾರ್ ಸಂಖ್ಯೆಯಿಂದ ಸ್ಟೇಟಸ್ ನೋಡುವುದು ಸಾಧ್ಯವಾಗುವುದಿಲ್ಲ.