ಕೇಂದ್ರ ಸರ್ಕಾರ ರೈತರಿಗೆಂದೇ ಮೀಸಲಾದ ಒಂದು ಯೊಜನೆಯನ್ನು ಜಾರಿಗೊಳಿಸಿದ್ದು ಇದನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಅಂತ ಕರೆಯಲಾಗುತ್ತದೆ.
ಈ ಯೋಜನೆ ಅಡಿ ರೈತರಿಗೆ ಆರ್ಥಿಕವಾಗಿ ನೆರವಾಗಲು ವಾರ್ಷಿಕವಾಗಿ ರೂ. 6,000 ನೀಡಲಾಗುತ್ತದೆ.
ಸದರಿ ಹಣವನ್ನು ತಲಾ ರೂ. 2,000 ಗಳ ಮೂರು ಕಂತುಗಳಲ್ಲಿ ಪ್ರತಿ 4 ತಿಂಗಳಿಗೊಮ್ಮೆ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಇದುವರೆಗೆ ಸುಮಾರು 10 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 11 ಕಂತುಗಳನ್ನು ವರ್ಗಾಯಿಸಲಾಗಿದೆ.
ಪ್ರಸ್ತುತವಾಗಿ ಯೋಜನೆಯ ಫಲಾನುಭವಿಗಳು 12ನೇ ಕಂತಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
12 ನೇ ಕಂತಿನ ಸ್ಟೇಟಸ್ ಬಗ್ಗೆ ತಿಳಿದುಕೊಳ್ಳಲು ಕಾತುರರಾಗಿದ್ದೀರಾ? ನಿಮಗೆ 12 ನೇ ಕಂತು ಸಿಗುತ್ತೋ ಇಲ್ಲವೋ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಿಗೋದಾದರೆ ಯಾವಾಗ ಸಿಗುತ್ತೆ ಅನ್ನೋದನ್ನು ಪರಿಶೀಲಿಸುವ ಮಾರಾಯ್ರೇ.
ಕೇಂದ್ರ ಸರ್ಕಾರವು ಇಷ್ಟರಲ್ಲೇ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಿದೆ.
ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ 12 ನೇ ಕಂತಿನ ಹಣ ಮುಂದಿನ ಎರಡು ವಾರಗಳಲ್ಲಿ ನಿಮ್ಮ ಖಾತೆಗೆ ಜಮೆಯಾಗಲಿದೆ.